ಜೂನ್/ಜುಲೈ-2025 ರಲ್ಲಿ ಜರುಗಲಿರುವ 2024-25 ನೇ ಶೈಕ್ಷಣಿಕ ಸಾಲಿನ ಪ್ರಥಮ ಮತ್ತು ತೃತೀಯ ಸೆಮಿಸ್ಟರ್‌ನ ಲಿಖಿತ ಪರೀಕ್ಷೆಗಳ ಪರೀಕ್ಷಾ ಶುಲ್ಕ ಅರ್ಜಿಗಳನ್ನು ಸ್ವೀಕರಿಸುವ ದಿನಾಂಕ ಹಾಗೂ ಪರೀಕ್ಷೆಗಳು ಪ್ರಾರಂಭವಾಗುವ ತಾತ್ಕಾಲಿಕ ವಿವರಗಳನ್ನು ಈ ಕೆಳಗಿನಂತೆ ಅಧಿಸೂಚಿಸಲಾಗಿದೆ.

ಸೂಚನೆಗಳು
1. ಜೂನ್/ಜುಲೈ-2025 ಪರೀಕ್ಷಾ ಅರ್ಜಿಗಳನ್ನು UUCMS ಮೂಲಕ ಮಾತ್ರ ಪಡೆಯಬಹುದಾಗಿದ್ದು, ಯಾವುದೇ ಕಾರಣಕ್ಕೂ ಮಾನವಲ್ ಅರ್ಜಿಗಳನ್ನು ನೀಡುವುದಿಲ್ಲ.
2. ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶವಿರುವದಿಲ್ಲ.

3. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2 (ಎ),ಪ್ರವರ್ಗ-2 (ಬಿ), ಪ್ರವರ್ಗ-3 (ಎ), ಪ್ರವರ್ಗ-3 (ಬಿ) ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು, ಪೂರ್ಣ ಪರೀಕ್ಷಾ ಶುಲ್ಕ ಭರಿಸುವುದು. ಪ್ರತಿಪರ ಕೋರ್ಸುಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ಇರುವದಿಲ್ಲ.
4. ಪ್ರತಿಯೊಂದು ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಆಂತರಿಕ ಅಂಕಗಳನ್ನು UUCMS ಪೋರ್ಟಲ್ ಮೂಲಕ ಸಲ್ಲಿಸುವಾಗ Mean ಕ್ರಮ (ಪ್ರತಿಶತ 85% ಮೀರದಂತೆ) ಅನುಸರಿಸಬೇಕು ತಪ್ಪಿದಲ್ಲಿ ಪ್ರಾಂಶುಪಾಲರ ಮೇಲೆ ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಸೂಕ್ತ ಕ್ರಮ ಕೈಗೊಳಲಾಗುವುದು.
5. ಒಮ್ಮೆ ಪಾವತಿಸಲಾದ ಪರೀಕ್ಷಾ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ ಹಾಗೂ ಅದನ್ನು ಮುಂದಿನ ಪರೀಕ್ಷೆಗಳಿಗೆ ಸರಿದೂಗಿಸಿಕೊಳ್ಳಲಾಗುವುದಿಲ್ಲ ಮತ್ತು ಇಂತಹ ವಿಷಯಗಳಿಗೆ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
6. ಯಾವುದೇ ಪರಿಸ್ಥಿತಿಯಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿ ತಿಳಿಸಿದ ಕೊನೆಯ ದಿನಾಂಕ ಮುಗಿದ ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಮತ್ತು ಯಾವುದೇ ಕಾರಣಕ್ಕಾಗಿ ಪರೀಕ್ಷೆಗಳು ಮುಂದೂಡಿದಲ್ಲಿ ಶುಲ್ಕ ಪಾವತಿಸುವ ದಿನಾಂಕಗಳು ಬದಲಾವಣೆಯಾಗುವುದಿಲ್ಲ.
7. ವಿಶ್ವವಿದ್ಯಾಲಯ ನಿಗದಿಪಡಿಸಿದ ಪರೀಕ್ಷಾ ಅರ್ಜಿ ತಾಪಾಸಣೆ ಶುಲ್ಕ ರೂ.20/- ರಲ್ಲಿ ವಿದ್ಯಾರ್ಥಿಗಳ ರೂ.10/-ನ್ನು ಪರೀಕ್ಷಾಂಗ ವಿಭಾಗ ಗುಲಬಗಾ ವಿಶ್ವವಿದ್ಯಾಲಯ, ಕಲಬುರಗಿ ಇವರಿಗೆ ಪಾವತಿಸಬೇಕು. ಉಳಿದ ರೂ.10/-ನ್ನು ತಮ್ಮ ಕಾಲೇಜಿನ ಪ್ರಾಂಶುಪಾಲರ ಬ್ಯಾಂಕ್ ಖಾತೆಗೆ ಪಾವತಿಸಬೇಕು.
8. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತಮ್ಮ ಉತ್ತರಗಳನ್ನು ಕೇವಲ ಇಂಗ್ಲೀಷ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಉಳಿದ ಭಾಷೆಗಳಲ್ಲಿ ಬರೆಯತಕ್ಕದ್ದಲ್ಲ ಎಂಬುದನ್ನು ಪ್ರಾಂಶುಪಾಲರು ಅಭ್ಯರ್ಥಿಗಳ ಗಮನಕ್ಕೆ ತರಬೇಕು. ವಿದ್ಯಾರ್ಥಿಗಳು ಇಂಗ್ಲೀಷ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಬರೆಯದೇ ಬೇರೆ ಮಾಧ್ಯಮದಲ್ಲಿ ಬರೆದರೆ ಅಂತಹ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನವಾಗದೇ ಉಳಿಯುತ್ತವೆ. ಅಂಥಹ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಅನೂರ್ಜಿತಗೊಳಿಸಲಾಗುವುದೆಂದು ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಇದು ಭಾಷಾ ವಿಷಯಗಳಿಗೆ ಅನ್ವಯವಾಗುವುದಿಲ್ಲ.
9. ಎಲ್ಲಾ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಂಶುಪಾಲರುಗಳಿಗೆ ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಅಧಿಸೂಚನೆಯಲ್ಲಿ ತಿಳಿಸಿದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅವರದ್ದಾಗಿದೆ ಎಂಬುದು ಮನವರಿಕೆ ಮಾಡಿಕೊಡಲು ಸೂಚಿಸಲಾಗಿದೆ.


ವಿಶೇಷ ಸೂಚನೆ:
ಪರೀಕ್ಷೆಗಳು ಮರು ಅವಕಾಶದಲ್ಲಿ (ರಿಪಿಟರ್ಸ) ಬರೆಯುತ್ತಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಒಂದ ರಿಂದ ಮೂರರ ವರೆಗಿನ ಪತ್ರಿ ಪತ್ರಿಕೆಗೆ ರೂ. 1000/- ಪರೀಕ್ಷಾ ಶುಲ್ಕ ಭರಿಸಬೇಕು. ಮೂರ ಕ್ಕಿಂತ ಹೆಚ್ಚು ವಿಷಯಗಳಲ್ಲಿ ಪರೀಕ್ಷೆ ಬರೆಯುತ್ತಿದ್ದರೆ ಅಂತಹ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಪರೀಕ್ಷಾ ಶುಲ್ಕ ಭರಿಸಬೇಕು.

Contact us

List your BE.d College with Us

You can list your college details in this website. Please contact us. 

Comments

Leave a Reply

Your email address will not be published. Required fields are marked *

Sign In

Register

Reset Password

Please enter your username or email address, you will receive a link to create a new password via email.