RV (Rashtreeya Vidyalaya)Teachers' College

RV (Rashtreeya Vidyalaya)Teachers' College
Intake : 75
Institute Code : 11074
Hostel : NO
Mobile Number : +919448412992
University : BANC- Bang.Central University
Institute Type : AIDED CO-ED
Address :

RV (Rashtreeya Vidyalaya)Teachers’
College Jayanagar, 2nd Block, Near
Ashoka Pillar Bangalore-560011

District Name : Bangalore Urban
Methods : EN-English, HI-History, HN-Hindi, KA-Kannada,, MA-Marathi, SCNC-Science, SK-Sanskrit, UR-Urdu

ಎನ್‌ಸಿಟಿಇ ಅನುಮೋದಿತ ಕಾರ್ಯಕ್ರಮಗಳು

ಬೆಂಗಳೂರು ಸೆಂಟರ್ ಯೂನಿವರ್ಸಿಟಿಗೆ ಅನುಗುಣವಾಗಿ

(ಬಿ,ಇಡಿ) ಮತ್ತು (ಎಂ,ಇಡಿ)

ಆರ್.ವಿ ಶಿಕ್ಷಕರ ತರಬೇತಿ ಕಾಲೇಜು ವೆಬ್‌ಸೈಟ್‌ಗೆ ಸ್ವಾಗತ

ಆರ್.ವಿ. ಶಿಕ್ಷಕರ ಕಾಲೇಜು, ಕರ್ನಾಟಕ ರಾಜ್ಯದಲ್ಲಿನ ಅನುದಾನಿತ ಕಾಲೇಜುಗಳಲ್ಲಿ ಮೊದಲ ಅನುದಾನವಾಗಿದ್ದು, 1954ರಲ್ಲಿ ಸ್ಥಾಪನೆಗೊಂಡಿತು. ಇದು ಬೆಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟಿದೆ(/ಅಂಗಸಂಸ್ಥೆಯಾಗಿದೆ) ಮತ್ತು ಇದನ್ನು ಶಿಕ್ಷಕರ ತರಬೇತಿ ಶಿಕ್ಷಣ ರಾಷ್ಟ್ರೀಯ ಮಂಡಳಿ(ನ್ಯಾಷನಲ್‌ ಕೌನ್ಸಿಲ್‌ ಆಫ್‌ ಟೀಚರ್ಸ್‌ ಟ್ರೈನಿಂಗ್‌) ಅನುಮೋದಿಸಿದೆ. ಇದು ಎರಡು ವರ್ಷದ ಬಿ.ಇಡಿ(ಶಿಕ್ಷಕರ ತರಬೇತಿ ಪದವಿ) ಕಾರ್ಯಕ್ರಮವನ್ನು ನಾಲ್ಕು ಸೆಮಿಸ್ಟರ್‌ಗಳೊಂದಿಗೆ ನೀಡುತ್ತಿದೆ ಮತ್ತು ಇದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಅರೆಕಾಲಿಕ ಸಮಯದ(ಪಾರ್ಟ್‌ಟೈಂ) ಎಂ.ಇಡಿ(ಶಿಕ್ಷಕರ ತರಬೇತಿ ಸ್ನಾತಕೋತ್ತರ ಪದವಿ) ಕಾರ್ಯಕ್ರಮದ ಅಧ್ಯಯನ ಕೇಂದ್ರವಾಗಿದೆ.

          ಕಾಲೇಜಿನ ಕುರಿತು

ಮೈಸೂರು ಮಹಾರಾಜರಾದ ಶ್ರೀ.ಜಯಚಮಾರಾಜ ಒಡೆಯರ್ ಅವರು ಈ ಕಾಲೇಜಿಗೆ ಅಡಿಗಲ್ಲು ಹಾಕಿದವರು. ಅವರು ಕಾಲೇಜಿಗೆ ಆಶೀರ್ವದಿಸಿದರು ಮತ್ತು ಎಲ್ಲವು ಯಶಸ್ವಿಯಾಗಲಿ ಎಂದು ಹಾರೈಸಿದರು. ಮೈಸೂರು ಆಗಿನ ಮುಖ್ಯಮಂತ್ರಿಯಾಗಿದ್ದ ಶ್ರೀ.ಕೆ.ಹನುಮಂತಯ್ಯನವರು ಕಾಲೇಜಿಗೆ ಅಗತ್ಯ ಭೂಮಿಯನ್ನು ನೀಡಿದರು. ರಾಷ್ಟ್ರೀಯ ಶಿಕ್ಷಣ ಸಮಿತಿಯು, ಇಂಜಿನಿಯರಿಂಗ್ ಕಾಲೇಜು, ಡೆಂಟಲ್ ಕಾಲೇಜು, ಎನ್ಎಂಕೆಆರ್‌ವಿ ಕಾಲೇಜು ಮತ್ತು ಎಸ್ಎಸ್ಎಂಆರ್‌ವಿ ಕಾಲೇಜು ಮತ್ತು ಶಿಕ್ಷಕರ ಕಾಲೇಜು ಮುಂತಾದ ಎರಡು ಡಜನ್‌ಗಿಂತಲೂ ಹೆಚ್ಚಿನ ಸಂಸ್ಥೆಗಳ ಆಡಳಿತ ನಡೆಸುತ್ತಿದೆ. ಆರ್.ವಿ ನರ್ಸರಿ ಶಾಲೆಗೆ ದಾಖಲಾದ ಮಗುವು ನಮ್ಮ ಶಾಲೆಯಲ್ಲಿ ಡೆಂಟಲ್, ನರ್ಸಿಂಗ್, ಫಿಸಿಯೋಥೆರಪಿ, ಎಂಜಿನಿಯರಿಂಗ್ ಅಥವಾ ಶಿಕ್ಷಕರ ತರಬೇತಿಯಂತಹ ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ತರಬೇತಿ ಪಡೆದು ಹೊರಬರಬಹುದು.

ಆರ್‌ವಿ ಶಿಕ್ಷಕರ ತರಬೇತಿ ಕಾಲೇಜು ಏಕೆ ನಿಮ್ಮ ಆಯ್ಕೆಯಾಗಬೇಕು?

ಅತ್ಯುತ್ತಮ ಪೀಠೋಪರಣಗಳೊಂದಿಗೆ ಸುಸಜ್ಜಿತ ‘ಇ’ ಕ್ಲಾಸ್‌ರೂಂ(/ತರಗತಿ ಕೊಠಡಿ)ಗಳನ್ನು ಹೊಂದಿರುವ ವೈ-ಫೈ ಕ್ಯಾಂಪಸ್‌.

25000ಕ್ಕೂ ಅಧಿಕ ಶೀರ್ಷಿಕೆಗಳೊಂದಿಗಿನ ಗ್ರಂಥಾಲಯ. ಆಧಾರ ಪುಸ್ತಕಗಳು / ನಿಯತಕಾಲಿಕೆಗಳು (ಮುದ್ರಿತ ಮತ್ತು ಲೈನ್) ನಿಯತಕಾಲಿಕ/ ವಿಭಜಿತ ಮತ್ತು ಎಸ್ಸಿ / ಎಸ್ಟಿ ಪುಸ್ತಕ ಬ್ಯಾಂಕ್‌

ಸಂಶೋಧನಾಶೀಲ, ಬದ್ಧತೆಹೊಂದಿರುವ ಮತ್ತು ಅತ್ಯುನ್ನತ ಅರ್ಹತೆ ಹೊಂದಿರುವ ಬೋಧಕವರ್ಗ

ಅತ್ಯಾಧುನಿಕ ಸಂಶೋಧನಾ ಕೇಂದ್ರ

500ಕ್ಕೂ ಅಧಿಕ ಆಸನ ಸಾಮರ್ಥ್ಯದ ಹವಾನಿಯಂತ್ರಿತ ಸಭಾಂಗಣ

ಸಮಾವೇಶ / ಸೆಮಿನಾರ್ ಹಾಲ್

ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಪರಿಕರಗಳೊಂದಿಗೆ ಆಟದ ಮೈದಾನ

ಮನಃಶಾಸ್ತ್ರ ಪ್ರಯೋಗಾಲಯ

ಅರ್ಹತೆ ಪಡೆದವರಿಗೆ / ಎಸ್‌ಸಿ-ಎಸ್‌ಟಿ / ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ದುರ್ಬಲವಾದ ವಿಭಾಗದ ವಿದ್ಯಾರ್ಥಿಗಳಿಗೆ ಆಕರ್ಷಕ ವಿದ್ಯಾರ್ಥಿವೇತನ

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌(ಆರ್‌ಎಸ್‌ಎಸ್‌ಟಿ)

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌(ಆರ್‌ಎಸ್‌ಎಸ್‌ಟಿ) ಅನ್ನು ಶ್ರೀ.ಎಂ.ಸಿ.ಶಿವಾನಂದ ಶರ್ಮಾ ಅವರು ಸ್ವತಂತ್ರ ಪೂರ್ವ ಭಾರತದಲ್ಲಿ ಶಿಕ್ಷಣವು ಒಂದು ಸವಾಲಾಗಿದ್ದ ಸಮಯದಲ್ಲಿ ಸ್ಥಾಪಿಸಿದರು. ‘ಸಮಾಜದ ಎಲ್ಲಾ ವಿಭಾಗಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು’ ಸಂಸ್ಥಾಪಕರ ಉದ್ದೇಶವಾಗಿತ್ತು. 1940ರಲ್ಲಿ ಶಿಕ್ಷಣ ತಜ್ಞರಾದ ಶ್ರೀ ಎಂ.ಸಿ ಶಿವಾನಂದ ಶರ್ಮಾ ಅವರು ಮತ್ತು ಉದ್ಯಮಿ ಮತ್ತು ಲೋಕೋಪಕಾರಿ ಶ್ರೀ ಮೆದ ಕಸ್ತೂರಿ ರಂಗ ಶೆಟ್ಟಿ ಒಟ್ಟಾಗಿ ಕೈಜೋಡಿಸಿ ಈ ಶೈಕ್ಷಣಿಕ ಆಂದೋಲನವನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಇಂದು, ಏಳು ದಶಕಗಳ ನಂತರ ಆರ್‌ಎಸ್‌ಎಸ್‌ಟಿ(ರಾಷ್ಟ್ರೀಯ ವಿದ್ಯಾಲಯ)ಆರ್‌ವಿ ಶೈಕ್ಷಣಿಕ ಸಂಸ್ಥೆಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಮುಂಚೂಣಿ ಸಂಸ್ಥೆಯಾಗಿದೆ.

ಬೆಂಗಳೂರಿನ ಪ್ರಮುಖ ಕೈಗಾರಿಕೋದ್ಯಮಿಗಳಲ್ಲೊಬ್ಬರಾದ ಶ್ರೀ.ಎಂ.ಕೆ.ಪಾಂಡುರಂಗ ಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷರು ಮತ್ತು ಶ್ರೀ.ಎ.ವಿ.ಎಸ್. ಮೂರ್ತಿ ಅದರ ಗೌರವ ಕಾರ್ಯದರ್ಶಿ ಮತ್ತು ಶ್ರೀ.ಡಿ.ಪಿ.ನಾಗರಾಜ್ ಅವರು ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಟ್ರಸ್ಟ್‌ ಸಾಕಷ್ಟು ಸಂಖ್ಯೆಯ ಪ್ರಗತಿಪರ ಟ್ರಸ್ಟಿಗಳನ್ನು ಹೊಂದಿದ್ದು, ಅವರು ಶಿಕ್ಷಣದ ಕುರಿತು ಆಳವಾಗಿ ಆಸಕ್ತಿ ಹೊಂದಿರುತ್ತಾರೆ. ಟ್ರಸ್ಟ್‌ನ ಅವಿರತ ಪ್ರಯತ್ನಗಳು ಶೈಕ್ಷಣಿಕ ಸಂಸ್ಥೆಗಳನ್ನು ತಮ್ಮಲ್ಲಿ ತಾವು ನೆಲೆ ಕಂಡುಕೊಳ್ಳುವಂತೆ ಮಾಡಿದೆ. ಪ್ರತಿಯೊಂದು ಸಂಸ್ಥೆಯು ಕರ್ನಾಟಕದ ಜನರಿಂದ ಅತ್ಯಗ್ರ ಶ್ರೇಯಾಂಕ ಪಡೆದಿದೆ. ಉದಾಹರಣೆಗೆ ಆರ್.ವಿ. ಇಂಜಿನಿಯರಿಂಗ್ ಕಾಲೇಜು ದೇಶದಲ್ಲಿನ ಹತ್ತು ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಆರ್.ವಿ. ಟೀಚರ್ಸ್‌ ಕಾಲೇಜು, ಇಡೀ ಕರ್ನಾಟಕದಲ್ಲಿ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ ಸ್ಟಡೀಸ್‌ ಇನ್‌ ಎಜ್ಯುಕೇಷನ್‌ ಎಂಬ ಮನ್ನಣೆ ಹೊಂದಿರುವ ಏಕಮಾತ್ರ ಕಾಲೇಜು ಎನಿಸಿದೆ.

ರಾಷ್ಟ್ರೀಯ ಶಿಕ್ಷಣ ಸಮಿತಿ, ಹಿಂದಿನ ಮೈಸೂರು ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ಶಿಕ್ಷಕರ ತರಬೇತಿ ಕಾಲೇಜನ್ನು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ.  ಇದು ನಮ್ಮ ಆರ್.ಎಸ್.ಎಸ್.ಟಿಯ ಸಂಸ್ಥಾಪಕ ಕಾರ್ಯದರ್ಶಿ, ಮಹಾನ್ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಎಂ.ಸಿ. ಶಿವಾನಂದ ಶರ್ಮಾ ಅವರ ದೂರದೃಷ್ಟಿತ್ವವಾಗಿದೆ. ಶಿಕ್ಷಕರಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ಬೆಳೆಸಲು ಶಿಕ್ಷಣ ತರಬೇತಿ ಕಾಲೇಜು ಪ್ರಾರಂಭಿಸುವ ಅಗತ್ಯವಿದೆ ಎಂಬುದನ್ನು ಅವರು ಮನಗೊಂಡಿದ್ದರು.

 

ಅವರ ಪ್ರಾಮಾಣಿಕ ಪ್ರಯತ್ನಗಳು 1954ರಲ್ಲಿ ಆರ್‌.ವಿ ಶಿಕ್ಷಕರ ಕಾಲೇಜಿಗೊಂದು ಸ್ವರೂಪ ನೀಡಿತು.. ಇದು ಬೆಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟಿದ್ದು ಎನ್‌ಸಿಟಿಇ ಇಂದ ಮಾನ್ಯತೆ ಪಡೆದಿದೆ.

ಶಿಕ್ಷಕರಿಗೆ ಸೇವಾ ಶಿಕ್ಷಣ ಒದಗಿಸುವ ಪ್ರತಿಷ್ಠಿತ ಸಂಸ್ಥೆ ನವದೆಹಲಿಯ ಡಿಪಿಇಪಿಎಸ್‌ಇ ನಮ್ಮ ಕಾಲೇಜನ್ನು ಗುರುತಿಸಿದೆ. ನಾವು ಅದೃಷ್ಟಶಾಲಿಗಳಾಗಿದ್ದು, 1957ರಿಂದಲೇ ವಿಸ್ತರಣೆ ಸೇವೆಗಳ ವಿಭಾಗವನ್ನು ಹೊಂದಿದ್ದೇವೆ. ಅಲ್ಲಿಂದೀಚೆಗೆ, ರಾಜ್ಯದಾದ್ಯಂತ ಶಾಲೆಗಳ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಪ್ರವೇಶ ಕಾರ್ಯಕ್ರಮಗಳು ಕಾರ್ಯಾಗಾರಗಳು, ಚರ್ಚೆಯ ಸಭೆಗಳಂತಹ ಹಲವಾರು ಸೇವೆಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ, ಸಾವಿರಾರು ಶಿಕ್ಷಕರು ವಿಸ್ತರಣೆ ಸೇವೆಗಳ ವಿಭಾಗದಿಂದ ಶೈಕ್ಷಣಿಕ ಲಾಭ ಪಡೆದಿದ್ದಾರೆ.

ಸೇವಾ ಶಿಕ್ಷಣದ ಜೊತೆಗೆ, ತರಗತಿ ಬೋಧನೆಗೆ ಸಂಬಂಧಿಸಿದ ಹಲವಾರು ಪ್ರಕಟಣೆಗಳನ್ನೂ ವಿಸ್ತರಣೆ ಸೇವೆಯ ವಿಭಾಗದಿಂದ ಹೊರತಂದಿದೆ. ಸೇವಾ ಶಿಕ್ಷಣದ ಕಾರ್ಯಕ್ರಮಗಳಲ್ಲಿ ಅವುಗಳನ್ನು ಶಿಕ್ಷಕರಿಗೆ ಉಚಿತವಾಗಿ ವಿತರಿಸಲಾಗಿದೆ. ಆದ್ದರಿಂದ ಕಾಲೇಜು ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ಮೂರು ವಿಭಾಗಗಳಲ್ಲಿ ಸೇವೆ ನೀಡುವ ಮೂಲಕ ಶಿಕ್ಷಕರ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ. ಅಂದರೆ: ಬೋಧನೆ, ವಿಸ್ತರಣೆ ಮತ್ತು ಸಂಶೋಧನೆ.

ನಮ್ಮ ಕಾಲೇಜಿನ ಇತಿಹಾಸದಲ್ಲಿ ಮತ್ತೊಂದು ಪ್ರಮುಖ ಮೈಲುಗಲ್ಲು 1974ರಲ್ಲಿ ಸ್ನಾತಕೋತ್ತರ ವಿಭಾಗದ ಪ್ರಾರಂಭ. ಸೇವಾ ಶಿಕ್ಷಣದ ಅಡಿಯಲ್ಲಿನ ಶಿಕ್ಷಕರ ಲಾಭಕ್ಕಾಗಿ  ಬಿ.ಇಡಿ ಮತ್ತು ಎಮ್.ಇಡಿಗಳಲ್ಲಿ ಸಂಜೆಯ ತರಬೇತಿ ನೀಡುತ್ತಿರುವ ಮೊದಲ ಖಾಸಗಿ ಕಾಲೇಜು. ಉನ್ನತ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ವಿದ್ಯಾರ್ಹತೆ ಹಾಗೂ ಶೈಕ್ಷಣಿಕ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಸಾಕಷ್ಟು ಕಾರ್ಯನಿರತ ಶಿಕ್ಷಕರಿಗೆ ಈ ಕಾರ್ಯಕ್ರಮ ವರದಾನವಾಗಿದೆ.

1996ರಲ್ಲಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ, ನವದೆಹಲಿಯು, ದೇಶದ ಕೆಲವು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣದ ಸುಧಾರಿತ ಅಧ್ಯಯನಗಳ ಸಂಸ್ಥೆಯಾಗಿ ನವೀಕರಿಸಿತು. ನಮ್ಮ ಕಾಲೇಜು ನೀಡುತ್ತಿರುವ ಉತ್ತಮ ಶೈಕ್ಷಣಿಕ ಸೇವೆಯ ಕಾರಣದಿಂದಾಗಿ ನಮ್ಮ ಕಾಲೇಜು ಕೂಡ 1996ರಲ್ಲಿ ಐಎಎಸ್ಇಯ ಸ್ಥಾನಮಾನಕ್ಕೆ ಉನ್ನತೀಕರಣಗೊಂಡಿತು. ಇಡೀ ಕರ್ನಾಟಕದ ರಾಜ್ಯದಲ್ಲಿ ಇಂತಹ ಸ್ಥಾನಮಾನ ಪಡೆದ ಏಕೈಕ ಖಾಸಗಿ ಅನುದಾನಿತ ಕಾಲೇಜು ನಮ್ಮದ್ದು ಎಂದು ಹೇಳಲು ಬಹಳ ಸಂತೋಷವಾಗುತ್ತದೆ. ನಂತರ, ಐಎಎಸ್ಇಯಂತೆ ಅನುಸಾರವಾಗಿ ನಮ್ಮ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗಳು ಉನ್ನತೀಕರಣಗೊಂಡಿವೆ.

Sign In

Register

Reset Password

Please enter your username or email address, you will receive a link to create a new password via email.